Poets

Anwendung der Fadentechnik / ಕೂದಲೆಳೆಯ ತಂತ್ರ

Anwendung der Fadentechnik
Sie benötigen den Flashplayer , um dieses Video zu sehen

Der Länge ungewiss tastest du achtsam ab,
folgst dem Faden, als wäre es Nacht,
entscheidest blind, wo die Enden sind,
schneidest zweimal ins eigene Fleisch.
Verknotest die Schnur zum Fadenkreis.
Die Hände schlüpfen hinein, spannen sich an,
wollen senkrechte Seen sein.
Das erfordert Übung, ja, das weißt du,
das Einklemmen und Ausreißen von
Bildern in der Haut,
während das Fadenkreuz dich abtastet,
an jedem schmerzlichen Punkt,
immer in seiner Mitte,
bis der Knoten reißt, ruckartig,
und die Wasser ins Waagerechte stürzen.

ಕೂದಲೆಳೆಯ ತಂತ್ರ

ಅರಿವೇ ಆಗದ ಹಾಗೆ ನೀನು ನೂಲ  ಉದ್ದವನು ಸವರುವೆ
ಇರುಳೋ ಎಂಬಂತೆ ಅದ ಹಿಂಬಾಲಿಸುವೆ
ಅಂಧೆಯ ಹಾಗೆ ಕೊನೆಯ ಕಂಡುಕೊಳುವೆ
ನಿನ್ನದೇ ಬೆರಳುಗಳ ಎರಡೆರಡು ಬಾರಿ ಕತ್ತರಿಸಿಕೊಳುವೆ
ನೂಲ ಸಿಕ್ಕುಸಿಕ್ಕುಗಳ ವೃತ್ತವಾಗಿಸುವೆ
ಅದರೊಳಗೆ ನಿನ್ನ ಬೆರಳುಗಳು ನುಸುಳುವುವು, ಸೆಟಗೊಳುವುವು
ಉದ್ದ ಕಡಲಾಗಬಯಸುವುವು

ಬಲ್ಲೆ ನೀನು ಇದಕೆ ಕಲಿಯಬೇಕು
ಇಕ್ಕಟ್ಟಿನಲಿ ಸಿಲುಕಿಸುವುದು ಇದು
ತೊಗಲ ಮೇಲೆ ಚಿತ್ತಾರವ ಮೂಡಿಸುವುದು
ಈ ಹೊತ್ತಲ್ಲಿ ಮುಡಿಯ ಗುರಿಯ ಈಡು ನಿನ್ನ ತಾಗುವುದು
ನಿನ್ನ ನೋವ ನಡುನಡುವಲ್ಲಿ
ಗಂಟುಗಳು ಹರಿದು ಹೋಗುವ ಹಾಗೆ ರಭಸದಲಿ ನುಗ್ಗಿ ಬರುವುದು
ಸಪಾಟಿನಲಿ ನೀರು.

Translation Kannada: Abdul Rasheed

 

Biography Orsolya Kalász

More poems

Das Blau der Haut /
തൊലിനീല


Die Sprache gibt den Löffel ab /
கைமாறும் இறப்பின் தருணம் / ಭಾಷೆ ಸಾಯುವ ಬಗೆ / ഭാഷ തവി കമിഴ്ത്തുമ്പോൾ


Wenn du deine Finger aus der Erde ziehst /
ಮಣ್ಣಿಂದ ಬೆರಳ ಹೊರ ತೆಗೆದಾಗ / உன் விரல்களை மண்ணுக்குள்ளிருந்து வெளியே எடுக்கும்போது -ஒர்ஷோயா கலாஸ் / നിന്‍റെ കൈവിരലുകളെ ഭൂമിയിൽ നിന്നു വലിച്ചെടുക്കുമ്പോൾ